LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

GOOD NEWS : PF ಖಾತೆದಾರರಿಗೆ ಕೇಂದ್ರದಿಂದ ಬಿಗ್ ಗಿಫ್ಟ್ : ಶೀಘ್ರದಲ್ಲೇ ಕನಿಷ್ಠ ಪಿಂಚಣಿ ₹3,000ಕ್ಕೆ ಏರಿಕೆ

ಕೇಂದ್ರ ಸರ್ಕಾರವು ಶೀಘ್ರದಲ್ಲೇ ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. ಪಿಎಫ್ ಕನಿಷ್ಠ ಪಿಂಚಣಿ ಮಿತಿಯನ್ನು ₹3,000 ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ ಎಂಬ ವದಂತಿಗಳು ಕೇಳಿಬರುತ್ತಿವೆ. ಒಂದು ವೇಳೆ ಇದೇ ಜಾರಿಯಾದರೆ, ಸಣ್ಣ ಉದ್ಯೋಗಿಗಳಿಗೆ ದೊಡ್ಡ ಮಟ್ಟದ ಲಾಭವಾಗಲಿದೆ. 58 ವರ್ಷಗಳ ನಂತರ ಅವರು ಪ್ರತಿ ತಿಂಗಳು ಹೆಚ್ಚಿನ ಪಿಂಚಣಿ ಪಡೆಯಲಿದ್ದಾರೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ದೇಶಾದ್ಯಂತ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತಿದೆ. ಪಿಎಫ್ ಖಾತೆಯಲ್ಲಿ ಉಳಿತಾಯ ಮಾಡುವ ಹಣಕ್ಕೆ ಬಡ್ಡಿಯ ಜೊತೆಗೆ ನಿವೃತ್ತಿಯ ನಂತರ ಪಿಂಚಣಿ ಸೌಲಭ್ಯವನ್ನೂ ಒದಗಿಸುತ್ತಿದೆ. ‘ಉದ್ಯೋಗಿಗಳ ಪಿಂಚಣಿ ಯೋಜನೆ 1995’ (EPS-95) ಅಡಿಯಲ್ಲಿ ಈ ಸೌಲಭ್ಯ ಜಾರಿಯಲ್ಲಿದೆ. ಇಪಿಎಫ್‌ಒಗೆ ಪಾವತಿಸುವ ಮೊತ್ತದಲ್ಲಿ ಒಂದು ಭಾಗವು ಪಿಂಚಣಿ ಖಾತೆಗೆ ಜಮೆಯಾಗುತ್ತದೆ.

ಪ್ರಸ್ತುತ ಕನಿಷ್ಠ ಪಿಂಚಣಿ ಮೊತ್ತ ₹1,000 ಆಗಿದ್ದು, ಇದನ್ನು ಶೀಘ್ರದಲ್ಲೇ ಕೇಂದ್ರ ಸರ್ಕಾರವು ₹3,000 ಕ್ಕೆ ಏರಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಇದರಿಂದ ಯಾರಿಗೆ ಲಾಭ? ಪಿಂಚಣಿ ಎಷ್ಟು ಹೆಚ್ಚಾಗಬಹುದು? ಎಂಬ ವಿವರಗಳು ಇಲ್ಲಿವೆ:

ಪಿಂಚಣಿ ಲೆಕ್ಕಾಚಾರ ಹೇಗೆ?

ಮಾಸಿಕ ₹15,000 ವರೆಗೆ ಮೂಲ ವೇತನ (Basic Salary) ಪಡೆಯುವವರು ಕಡ್ಡಾಯವಾಗಿ ಇಪಿಎಫ್‌ಒ ಖಾತೆ ಹೊಂದಿರಬೇಕು. ಅದಕ್ಕಿಂತ ಹೆಚ್ಚಿನ ಸಂಬಳ ಇರುವವರಿಗೆ ಇದು ಐಚ್ಛಿಕವಾಗಿರುತ್ತದೆ. ಉದ್ಯೋಗಿಯ ಸಂಬಳದಿಂದ 12% ಹಣ ಕಡಿತಗೊಳಿಸಿ ಪಿಎಫ್ ಖಾತೆಗೆ ಜಮೆ ಮಾಡಲಾಗುತ್ತದೆ ಮತ್ತು ಕಂಪನಿಯೂ ಅಷ್ಟೇ ಮೊತ್ತವನ್ನು ಪಾವತಿಸುತ್ತದೆ. ಕಂಪನಿಯ ಪಾಲಿನಿಂದ ಒಂದು ನಿರ್ದಿಷ್ಟ ಭಾಗವು ಪಿಂಚಣಿ ಯೋಜನೆಗೆ ಹೋಗುತ್ತದೆ.

ಈ ಪಿಂಚಣಿ ಪಡೆಯಲು ಕನಿಷ್ಠ 10 ವರ್ಷಗಳ ಕಾಲ ಇಪಿಎಫ್‌ಒಗೆ ಕೊಡುಗೆ ನೀಡಿರಬೇಕು. ಪ್ರಸ್ತುತ ನೀಡುತ್ತಿರುವ ₹1,000 ಪಿಂಚಣಿ ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಸಾಕಾಗುತ್ತಿಲ್ಲ ಎಂಬ ಕಾರಣಕ್ಕೆ ಪಿಂಚಣಿ ಹೆಚ್ಚಿಸಬೇಕೆಂದು ಉದ್ಯೋಗಿ ಸಂಘಟನೆಗಳು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದವು.

ಯಾರಿಗೆ ಎಷ್ಟು ಹಣ ಸಿಗಲಿದೆ?

ಪಿಂಚಣಿಯನ್ನು (ಕಳೆದ 60 ತಿಂಗಳ ಸರಾಸರಿ ವೇತನ x ಒಟ್ಟು ಸೇವಾ ಅವಧಿ) / 70 ಎಂಬ ಸೂತ್ರದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.

  • ಉದಾಹರಣೆ 1: ನಿಮ್ಮ 60 ತಿಂಗಳ ಸರಾಸರಿ ವೇತನ ₹10,000 ಆಗಿದ್ದು, ನೀವು 14 ವರ್ಷ ಸೇವೆ ಸಲ್ಲಿಸಿದ್ದರೆ, ಪ್ರಸ್ತುತ ನಿಮಗೆ ₹2,000 ಪಿಂಚಣಿ ಸಿಗುತ್ತದೆ. ಒಂದು ವೇಳೆ ಕನಿಷ್ಠ ಮಿತಿ ₹3,000 ಕ್ಕೆ ಏರಿಕೆಯಾದರೆ, ನಿಮಗೆ ಹೆಚ್ಚುವರಿಯಾಗಿ ₹1,000 ಲಾಭ ಸಿಗಲಿದೆ.
  • ಉದಾಹರಣೆ 2: ಸರಾಸರಿ ವೇತನ ₹12,000 ಆಗಿದ್ದು, 12 ವರ್ಷ ಸೇವೆ ಸಲ್ಲಿಸಿದ್ದರೆ ಪ್ರಸ್ತುತ ₹2,057 ಸಿಗುತ್ತಿದೆ. ಇದು ₹3,000 ಕ್ಕೆ ಏರಿಕೆಯಾದರೆ ₹943 ಹೆಚ್ಚುವರಿ ಹಣ ಸಿಗಲಿದೆ.

ಕಡಿಮೆ ಸಂಬಳ ಇರುವವರಿಗೆ ಪಿಂಚಣಿ ಹೆಚ್ಚಳದಿಂದ ಹೆಚ್ಚಿನ ಲಾಭವಾಗಲಿದೆ. ಪ್ರಸ್ತುತ ದೇಶಾದ್ಯಂತ 82 ಲಕ್ಷ ಮಂದಿ ಪಿಂಚಣಿ ಪಡೆಯುತ್ತಿದ್ದು, ಈ ಪೈಕಿ 47 ಲಕ್ಷ ಮಂದಿ ₹9,000 ಕ್ಕಿಂತ ಕಡಿಮೆ ಪಿಂಚಣಿ ಪಡೆಯುತ್ತಿದ್ದಾರೆ.


ಗಮನಿಸಿ: ಇದು ಸದ್ಯಕ್ಕೆ ಇರುವ ವರದಿಗಳ ಆಧಾರದ ಮೇಲಿನ ಮಾಹಿತಿ. ಕೇಂದ್ರ ಸರ್ಕಾರದಿಂದ ಅಧಿಕೃತ ಘೋಷಣೆ ಹೊರಬೀಳಬೇಕಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ