LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘LPG’ ಬಳಕೆದಾರರಿಗೆ ಗುಡ್ ನ್ಯೂಸ್ : 5 ಕೆಜಿ ಸಿಲಿಂಡರ್ ವಾಪಸ್ ಕೊಟ್ಟರೆ ₹500 ನಿಮ್ಮ ಖಾತೆಗೆ..!

ಅಡುಗೆ ಅನಿಲ ಬಳಕೆದಾರರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಅನುಕೂಲಕರ ಸೌಲಭ್ಯ ಲಭ್ಯವಾಗಿದೆ. 5 ಕೆಜಿ ‘ಛೋಟು’ ಎಲ್‌ಪಿಜಿ ಸಿಲಿಂಡರ್‌ನ್ನು ಖರೀದಿಸಿ ಬಳಿಕ ಯಾವುದೇ ಸಮಯದಲ್ಲಿ ಹಿಂತಿರುಗಿಸಿದರೆ ₹500 ರಿಫಂಡ್ ದೊರೆಯುತ್ತದೆ. ಸ್ಥಳೀಯ ವಿಳಾಸದ ದಾಖಲೆ ಅಗತ್ಯವಿಲ್ಲದ ಸಿಲಿಂಡರ್ ಉದ್ಯೋಗಿಗಳು, ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು ಹಾಗೂ ಸಣ್ಣ ಕುಟುಂಬಗಳಿಗೆ ಹೆಚ್ಚು ಉಪಯುಕ್ತವಾಗಿದೆ.

ದೇಶದಲ್ಲಿ ಸಾಮಾನ್ಯವಾಗಿ ಮನೆಗಳಲ್ಲಿ 14.2 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸಲಾಗುತ್ತದೆ. ವಾಣಿಜ್ಯ ಬಳಕೆಗೆ 19 ಕೆಜಿ ಸಿಲಿಂಡರ್‌ಗಳೂ ಲಭ್ಯವಿವೆ. ಆದರೆ ಇತ್ತೀಚಿನ ದಿನಗಳಲ್ಲಿ 5 ಕೆಜಿ ಸಾಮರ್ಥ್ಯದ ಛೋಟು ಎಲ್‌ಪಿಜಿ ಸಿಲಿಂಡರ್’ ಹೆಚ್ಚು ಜನಪ್ರಿಯವಾಗುತ್ತಿದೆ. ಇದನ್ನು ಬಳಸುವವರಿಗೆ ಹಲವು ವಿಶೇಷ ಸೌಲಭ್ಯಗಳಿದ್ದು, ಸಿಲಿಂಡರ್ ಹಿಂತಿರುಗಿಸಿದರೆ ₹500 ರಿಫಂಡ್ ಕೂಡ ದೊರೆಯುತ್ತದೆ.

ಅಮೆರಿಕಾ-ಇರಾನ್ ಸಂಘರ್ಷದ ವೇಳೆ ಎಲ್‌ಪಿಜಿ ಬೆಲೆ ಏರಿಕೆ ಮತ್ತು ಸರಬರಾಜಿನ ವ್ಯತ್ಯಯದಿಂದ ಗೃಹ ಹಾಗೂ ವಾಣಿಜ್ಯ ಬಳಕೆದಾರರಿಗೆ ತೊಂದರೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 5 ಕೆಜಿ ಸಾಮರ್ಥ್ಯದ ‘ಛೋಟು’ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪರಿಚಯಿಸಿತು. ಇದೀಗ ಈ ಸಿಲಿಂಡರ್‌ಗಳಿಗೆ ಉತ್ತಮ ಬೇಡಿಕೆ ಬಂದಿದೆ.

ಉದ್ಯೋಗಿಗಳು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಕಡಿಮೆ ಪ್ರಮಾಣದಲ್ಲಿ ಗ್ಯಾಸ್ ಬಳಸುವ ಕುಟುಂಬಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಈ 5 ಕೆಜಿ ಸಿಲಿಂಡರ್ ಅತ್ಯಂತ ಉಪಯುಕ್ತವಾಗಿದೆ. ಇದನ್ನು ಪಡೆಯಲು ಸ್ಥಳೀಯ ವಿಳಾಸದ ದಾಖಲೆ (Local Address Proof) ಅಗತ್ಯವಿಲ್ಲ. ಯಾವುದೇ ಮಾನ್ಯ ಗುರುತಿನ ಚೀಟಿ ನೀಡಿದರೆ ಸಾಕು.ಈ ಸಿಲಿಂಡರ್‌ಗಳನ್ನು ಪೆಟ್ರೋಲ್ ಬಂಕ್‌ಗಳು, ಕಿರಾಣಿ ಅಂಗಡಿಗಳು, ಸ್ಥಳೀಯ ಸೂಪರ್ ಮಾರ್ಕೆಟ್‌ಗಳು ಹಾಗೂ ಅಧಿಕೃತ ಗ್ಯಾಸ್ ವಿತರಕರಿಂದ ಖರೀದಿಸಬಹುದು. ಮುಂಗಡ ಬುಕ್ಕಿಂಗ್ ಅಗತ್ಯವಿಲ್ಲ. ಬೇರೆ ನಗರ ಅಥವಾ ಪಟ್ಟಣಕ್ಕೆ ಸ್ಥಳಾಂತರವಾದರೂ ಅಲ್ಲಿನ ಅಧಿಕೃತ ಮಾರಾಟ ಕೇಂದ್ರಗಳಲ್ಲಿ ಸುಲಭವಾಗಿ ರಿಫಿಲ್ ಮಾಡಿಸಬಹುದು.

ಈ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ, ಅಧಿಕೃತ ಮಾರಾಟ ಕೇಂದ್ರದಿಂದ ಖರೀದಿಸಿದ 5 ಕೆಜಿ ‘ಛೋಟು’ ಸಿಲಿಂಡರ್ ಅನ್ನು ಯಾವಾಗ ಬೇಕಾದರೂ ಹಿಂತಿರುಗಿಸಬಹುದು. ಸಿಲಿಂಡರ್ ಅನ್ನು ಎಷ್ಟು ವರ್ಷ ಬಳಸಿದ್ದರೂ ಹಿಂತಿರುಗಿಸುವ ವೇಳೆ ಪ್ರತಿ ಸಿಲಿಂಡರ್‌ಗೆ ₹500 ರಿಫಂಡ್ ನೀಡಲಾಗುತ್ತದೆ.

ಈ 5 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಇಂಡೇನ್, HP ಗ್ಯಾಸ್ ಮತ್ತು ಭಾರತ್ ಗ್ಯಾಸ್ ಕಂಪನಿಗಳು ದೇಶಾದ್ಯಂತ ಲಭ್ಯವಾಗುವಂತೆ ಮಾಡಿವೆ. ಸಾಮಾನ್ಯ ಎಲ್‌ಪಿಜಿ ಸಂಪರ್ಕಕ್ಕೆ ಏಜೆನ್ಸಿಯಲ್ಲಿ ಸ್ಥಳೀಯ ವಿಳಾಸದ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದ್ದರೂ, ಈ 5 ಕೆಜಿ ಸಿಲಿಂಡರ್ ಪಡೆಯಲು ಅಂತಹ ನಿಯಮ ಇರುವುದಿಲ್ಲ. ಇದೇ ಕಾರಣಕ್ಕೆ ಈ ಸಿಲಿಂಡರ್‌ಗಳು ಜನಪ್ರಿಯತೆ ಗಳಿಸುತ್ತಿವೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ