ಡಿಕೆ ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ನೇಮಕವಾದ ಬಳಿಕ ಮೊದಲ ಬಾರಿಗೆ ಕನಕಪುರಕ್ಕೆ ನಿನ್ನೆ ( ಜೂನ್ 7 ) ಭೇಟಿ ನೀಡಿದ್ದರು.
ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಡಿಕೆ ಶಿವಕುಮಾರ್‌ಗೆ ಎಲ್ಲೆಡೆ ಭರ್ಜರಿ ಸ್ವಾಗತ ದೊರಕಿತು ಹಾಗೂ ನೂತನ ಸಿಎಂಗೆ ಜೈಕಾರ ಮೊಳಗಿತು.
ಈ ಕುರಿತ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲೂ ದರ್ಶನ್ ಫ್ಯಾನ್ಸ್ ಗ್ರಾಮವೊಂದರಲ್ಲಿ ಡಿಕೆ ಮಾತನಾಡುವ ವೇಳೆ ದರ್ಶನ್‌ಗೆ ಜೈಕಾರ ಹಾಕಿದರು. ಡಿ ಬಾಸ್ ಡಿ ಬಾಸ್ ಎಂದು ಡಿಕೆಶಿ ಮಾತನಾಡುವ ವೇಳೆ ಕೂಗಾಟ ನಡೆಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ‘ಏಯ್ ಯಾವ್ ಡಿ ಬಾಸೂ ಇಲ್ಲ ಸುಮ್ಮನಿರಿ’ ಎಂದು ಡಿ ಬಾಸ್ ಜೈಕಾರಕ್ಕೆ ಯಾವುದೇ ಆದ್ಯತೆ ನೀಡದೇ ಸುಮ್ಮನಾದರು. ಬೆನ್ನಲ್ಲೇ ದರ್ಶನ್‌ಗೆ ಜೈಕಾರ ಕೂಗಿದ ಅಭಿಮಾನಿಗಳು ದರ್ಶನ್‌ರನ್ನು ಜೈಲಿನಿಂದ ಬಿಡುಗಡೆ ಮಾಡಿಸಿ ಎಂದು ಮನವಿ ಮಾಡಿಕೊಂಡರು. ಇದಕ್ಕೂ ಉತ್ತರ ನೀಡಿದ ‘ಗಲಾಟೆ ಪಲಾಟೆ ಮಾಡಿದ್ರೆ ಪೊಲೀಸರಿಂದ ಲಾಠಿ ಏಟೇ’ ಎಂದು ಹೇಳಿಕೆ ನೀಡಿದರು.
ಸದ್ಯ ಈ ವಿಡಿಯೊ ಎಲ್ಲೆಡೆ ಭಾರೀ ವೈರಲ್ ಆಗಿದ್ದು, ದರ್ಶನ್ ಪರ ಜೈಕಾರ ಕೂಗಿ ಬಿಡುಗಡೆ ಮಾಡಿಸಿ ಎಂದ ಅಭಿಮಾನಿಗಳಿಗೆ ಡಿಕೆಶಿ ನಯಾ ಪೈಸೆ ಮರ್ಯಾದೆ ಕೊಡದೇ ಅವಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.