LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೊಟ್ಟಿಯೂರಿನಲ್ಲಿ ಕನ್ನಡಿಗರಿಗೆ ಅವಮಾನ, ಮಹಿಳೆಯರ ಮೇಲೆ ಪುಂಟಾಟ; ಡಿ ಬಾಸ್ ಹೋಗಿದ್ದಕ್ಕೆ ಇಷ್ಟು ಜನ ಎಂದ ಫ್ಯಾನ್ಸ್!

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚಾಗಿ ಸದ್ದು ಮಾಡುತ್ತಿರುವ ಯಾತ್ರಾ ಸ್ಥಳವೆಂದರೆ ಅದು ಕೇರಳಂನ ಕಣ್ಣೂರು ಜಿಲ್ಲೆಯ ಕೊಟ್ಟಿಯೂರು ಶಿವನ ದೇವಸ್ಥಾನ.

ಎರಡು ವರ್ಷಗಳ ಮುಂಚ ಇಂತಹ ಜಾಗವೊಂದಿದೆ ಎಂಬ ಮಾಹಿತಿಯೂ ಇರದಿದ್ದ ಸಾವಿರಾರು ಮಂದಿ ಸದ್ಯ ಈ ದೇವಾಲಯದತ್ತ ಮುಖ ಮಾಡುತ್ತಿದ್ದಾರೆ. ಚಾಮರಾಜನಗರ ಹಾಗೂ ಮೈಸೂರು ನಗರಗಳಿಂದ ಸುಮಾರು ನಾಲ್ಕು ಗಂಟೆಗಳ ತಡೆರಹಿತ ಪ್ರಯಾಣದ ಅಂತರದಲ್ಲಿರುವ ಈ ದೇವಾಲಯಕ್ಕೆ ತನ್ನದೇ ಆತ ಆಳವಾದ ಇತಿಹಾಸವಿದೆ.

ವರ್ಷಕ್ಕೆ ಒಂದು ತಿಂಗಳು ಮಾತ್ರ ತೆರೆಯುವ ಈ ದೇವಸ್ಥಾನಕ್ಕೆ ಸ್ಥಳೀಯರು ಆಗಮಿಸಿ ಅವರ ಆಚರಣೆ ಪ್ರಕಾರ ಪೂನೆ ಸಲ್ಲಿಸುವುದು ವಾಡಿಕೆ. ಇನ್ನು ಹಿಂದೆಲ್ಲ ಕೇವಲ ಸ್ಥಳೀಯ ಜನರ ಆರಾಧ್ಯ ತಾಣವಾಗಿದ್ದ ಈ ಜಾಗ ಸದ್ಯ ಕಳೆದ ವರ್ಷದಿಂದ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿದೆ.

ಹೌದು, ಈ ಹಿಂದೆ ಕೊಟ್ಟಿಯೂರು ಶಿವನ ದೇವಾಲಯಕ್ಕೆ ಜನರೇನು ದೊಡ್ಡ ಮಟ್ಟದಲ್ಲಿ ಭೇಟಿ ನೀಡುತ್ತಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ದೇವಾಲಯದ ಕುರಿತು ವಿಡಿಯೊಗಳು ಹೆಚ್ಚಾಗಿ ಹರಿದಾಡಿದ ಕಾರಣ ಸದ್ಯ ಈ ವರ್ಷ ಜನರ ಸಾಗರವೇ ದೇವಾಲಯಕ್ಕೆ ಹರಿದು ಬಂದಿದೆ.

ಪರಿಣಾಮ ದೇವಾಲಯದ ಬಳಿ ಜನಸ್ತೋಮ ನೆರೆದು ಇಕ್ಕಟ್ಟಿಗೆ ಎಡೆ ಮಾಡಿಕೊಟ್ಟಿದೆ. ಅಪಾರ ಸಂಖ್ಯೆಯ ಜನರು ಭೇಟಿ ನೀಡಬಹುದಾದ ತಾಣವಲ್ಲದ ಈ ದೇವಾಲಯದಲ್ಲಿ ಸದ್ಯ ಜನ ಹಾಗೂ ಸಿಬ್ಬಂದಿ ನಡುವೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಅದರಲ್ಲೂ ಕರ್ನಾಟಕ ಮೂಲದ ಪ್ರವಾಸಿಗರಿಗೆ ಅಲ್ಲಿನ ಸಿಬ್ಬಂದಿ ಮರ್ಯಾದೆ ಕೊಡುತ್ತಿಲ್ಲ, ಅವಮಾನ ಮಾಡುತ್ತಿದ್ದಾರೆ, ಮಹಿಳೆಯರ ಮೇಲೆ ಪುಂಡಾಟ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಸಾವಿರ ರೂ ಟಿಕೆಟ್‌ಗೆ ಪಾವತಿ ಮಾಡಿಸಿಕೊಳ್ಳುತ್ತಾರೆ, ಆದರೆ ಯಾವುದೇ ಭದ್ರತೆ ಇಲ್ಲ ಎಂದು ಹಲವಾರು ಮಂದಿ ವಿಡಿಯೊ ಮಾಡಿ ಹಂಚಿಕೊಂಡಿದ್ದಾರೆ.

ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳೂ ಸಹ ವ್ಯಕ್ತವಾಗಿದ್ದು, ತಪ್ಪು ಯಾರದ್ದು, ಅಷ್ಟು ಜನ ಒಟ್ಟಿಗೆ ಹೋಗುವ ಅವರ್ಶಯಕತೆ ಏನಿತ್ತು ಎಂದೂ ಸಹ ಕಾಮೆಂಟ್ ಬರತೊಡಗಿವೆ. ಈ ನಡುವೆ ಈ ಜಾಗಕ್ಕೆ ಕರ್ನಾಟಕದ ಮಂದಿ ಏಕಾಏಕಿ ಇಷ್ಟು ಜನ ಬರಲು ಕಾರಣವೇನು ಎಂಬುದೂ ಸಹ ಚರ್ಚೆಯಾಗುತ್ತಿದೆ. ಇದಕ್ಕೆ ಅನೇಕ ದರ್ಶನ್ ಅಭಿಮಾನಿಗಳು ಕಳೆದ ವರ್ಷ ದೇವಾಲಯ ತೆರೆದಾಗ ತಮ್ಮ ನೆಚ್ಚಿನ ನಟ ದರ್ಶನ್ ಭೇಟಿ ನೀಡಿದ್ದರು. ಈ ವಿಡಿಯೊ ವೈರಲ್ ಆದ ಬಳಿಕ ಕರ್ನಾಟಕ ಜನತೆ ಈ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಆರಂಭಿಸಿದರು ಎಂದು ಹಳೆಯ ವಿಡಿಯೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ