LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಕೆಟ್ ಬೇಲ್ಸ್ ಬಿದ್ದರೂ ನಿತಿಶ್ ರಾಣಾ ಕ್ಯಾಚ್ ಔಟ್ ಆಗಿದ್ದೇಗೆ, ಅದು ಡೆಡ್ ಬಾಲ್ ಅಲ್ವಾ? ಚೆನ್ನೈ vs ಡೆಲ್ಲಿ ಪಂದ್ಯದಲ್ಲಿ ಮೋಸ ಎಂದ ನೆಟ್ಟಿಗರು; ವಿಡಿಯೊ

ನಿನ್ನೆ ( ಮೇ 5 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 48ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್‌ಗಳ ಗೆಲುವನ್ನು ದಾಖಲಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 7ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿ ಚೆನ್ನೈ ಸೂಪರ್ ಕಿಂಗ್ಸ್‌ಗೆ 156 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 17.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿತು.

ಇನ್ನು ಈ ಪಂದ್ಯದ ಕುರಿತು ವಿವಾದವೊಂದು ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ನ ನಿತಿಶ್ ರಾಣಾ ಕ್ಯಾಚ್ ಕುರಿತು ಅನುಮಾನಗಳು ವ್ಯಕ್ತವಾಗಿವೆ. ನೂರ್ ಅಹ್ಮದ್ ಎಸೆದ ಹತ್ತನೇ ಓವರ್‌ನ ಮೂರನೇ ಎಸೆತಕ್ಕೆ ಸ್ವೀಪ್ ಶಾಟ್ ಬಾರಿಸಲು ಹೋದ ನಿತಿಶ್ ರಾಣಾ ಕಾರ್ತಿಕ್ ಶರ್ಮಾಗೆ ಕ್ಯಾಚ್ ನೀಡಿದರು.

ಈ ಸಂದರ್ಭದಲ್ಲಿ ಸಂಜು ಸ್ಯಾಮ್ಸನ್ ಕಾಲು ತಾಗಿ ವಿಕೆಟ್ ಬೇಲ್ಸ್ ನೆಲಕ್ಕೆ ಉರುಳಿದವು, ಹೀಗೆ ಬೇಲ್ಸ್ ನೆಲಕ್ಕೆ ಉರುಳಿದರೆ ಅದು ನಾಟ್‌ಔಟ್ ಎಂದು ನೆಟ್ಟಿಗರು ವಾದಿಸುತ್ತಿದ್ದಾರೆ. ಆದರೆ ನಿಯಮದ ಪ್ರಕಾರ ಕ್ಯಾಚ್‌ಗೂ ವಿಕೆಟ್ ಕೀಪರ್‌ಗೆ ಅರಿವಿಲ್ಲದೇ ಬೇಲ್ಸ್ ನೆಲಕ್ಕೆ ಉರುಳುವುದಕ್ಕೂ ಯಾವುದೇ ಸಂಬಂಧವಿಲ್ಲ. ಕ್ಯಾಚ್ ಸರಿಯಾಗಿ ಆಗಿದ್ದರೆ ಅದನ್ನು ಔಟ್ ಎಂದೇ ಪರಿಗಣಿಸಲಾಗುತ್ತದೆ.

ಇನ್ನು ಈ ಪ್ರಕರಣದಲ್ಲಿ ವಿಕೆಟ್ ಬೇಲ್ಸ್ ನೆಲಕ್ಕೆ ಉರುಳಿದ್ದು ಸಂಜು ಸ್ಯಾಮ್ಸನ್‌ರಿಂದ ಅಲ್ಲ, ಬದಲಾಗಿ ಗಾಳಿಯಿಂದಾಗಿ.

ಹೀಗೆ ವಿಕೆಟ್ ಕೀಪರ್ ಕೈ ತಾಗಿ ಬೇಲ್ಸ್ ನೆಲಕ್ಕೆ ಉರುಳಿದರೆ ಅದು ಡೆಡ್ ಬಾಲ್ ಎನ್ನುವ ಹಾಗಿದ್ದರೆ ವನಿತೆಯರ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಡೆಲ್ಲಿ ವಿರುದ್ಧ ಆರ್‌ಸಿಬಿಯ ರಾಧಾ ಯಾದವ್ ಕೊನೆಯ ಬೌಂಡರಿ ಬಾರಿಸಿ ತಂಡವನ್ನು ಗೆಲ್ಲಿಸಿದಾಗಲೂ ವಿಕೆಟ್ ಕೀಪರ್ ಕೈ ತಾಗಿ ಬೇಲ್ಸ್ ನೆಲಕ್ಕೆ ಉರುಳಿತ್ತು. ಆಗಲೂ ಡೆಡ್ ಬಾಲ್ ಘೋಷಣೆ ಮಾಡದೇ ಅದನ್ನು ಲೀಗಲ್ ಡೆಲಿವರಿ ಎಂದು ಪರಿಗಣಿಸಲಾಯಿತು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ