LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗಣೇಶೋತ್ಸವ ಹಿನ್ನೆಲೆ: ಸೆ.13ರಿಂದ 27ರವರೆಗೆ ಈ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಡಿಸಿ ಆದೇಶ

ಧಾರವಾಡ: ಜಿಲ್ಲೆಯಲ್ಲಿ ಗಣಪತಿ ಬಪ್ಪನ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಮುನ್ನೆಚ್ಚರಿಕಾ ಕ್ರಮವಾಗಿ ವಿವಿಧ ತಾಲೂಕುಗಳಲ್ಲಿ ನಿಯಮಿತವಾಗಿ ಮದ್ಯ ಮಾರಾಟ, ಸಾಗಾಣಿಕೆ ಹಾಗೂ ಸೇವನೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಸ್ನೇಹಲ್ ಆರ್. ಅವರು ಖಡಕ್ ಆದೇಶ ಹೊರಡಿಸಿದ್ದಾರೆ.

ಹಬ್ಬದ ವಿಸರ್ಜನಾ ದಿನಗಳ ಆಧಾರದ ಮೇಲೆ ಜಿಲ್ಲೆಯ ಧಾರವಾಡ, ಹುಬ್ಬಳ್ಳಿ, ಅಳ್ನಾವರ, ಕಲಘಟಗಿ, ನವಲಗುಂದ, ಅಣ್ಣಿಗೇರಿ ಹಾಗೂ ಕುಂದಗೋಳ ತಾಲೂಕುಗಳಲ್ಲಿ ಸೆಪ್ಟೆಂಬರ್ 13 ರಿಂದ ಸೆಪ್ಟೆಂಬರ್ 27 ರವರೆಗಿನ ನಿಗದಿತ ಅವಧಿಗಳಲ್ಲಿ ಹಂತ-ಹಂತವಾಗಿ ಈ ಒಣದಿನ (Dry Days) ನಿಯಮ ಜಾರಿಯಲ್ಲಿರಲಿದೆ.

ತಾಲೂಕುವಾರು ಮದ್ಯ ನಿಷೇಧದ ವೇಳಾಪಟ್ಟಿ ಹೀಗಿದೆ:

ಹುಬ್ಬಳ್ಳಿ ತಾಲೂಕು (ಮೊದಲ 3 ದಿನಗಳು):

  • ಅವಧಿ: ಸೆಪ್ಟೆಂಬರ್ 13 ರ ರಾತ್ರಿ 11:59 ರಿಂದ ಸೆಪ್ಟೆಂಬರ್ 17 ರ ಬೆಳಿಗ್ಗೆ 6:00 ಗಂಟೆಯವರೆಗೆ ಸಂಪೂರ್ಣ ಮದ್ಯ ಮಾರಾಟ ಹಾಗೂ ಸಾಗಾಟ ಬಂದ್.

ಧಾರವಾಡ ಜಿಲ್ಲೆಯ ಎಲ್ಲಾ ತಾಲೂಕುಗಳು (ವಿಸರ್ಜನಾ ದಿನಗಳ ಪ್ರಕಾರ):

  • 1ನೇ ದಿನದ ವಿಸರ್ಜನೆ: ಸೆಪ್ಟೆಂಬರ್ 13 ರ ರಾತ್ರಿ 11:59 ರಿಂದ ಸೆಪ್ಟೆಂಬರ್ 15 ರ ಬೆಳಿಗ್ಗೆ 06:00 ರವರೆಗೆ.

  • 5ನೇ ದಿನದ ವಿಸರ್ಜನೆ: ಸೆಪ್ಟೆಂಬರ್ 17 ರ ರಾತ್ರಿ 11:59 ರಿಂದ ಸೆಪ್ಟೆಂಬರ್ 19 ರ ಬೆಳಿಗ್ಗೆ 06:00 ರವರೆಗೆ.

  • 7ನೇ ದಿನದ ವಿಸರ್ಜನೆ: ಸೆಪ್ಟೆಂಬರ್ 19 ರ ರಾತ್ರಿ 11:59 ರಿಂದ ಸೆಪ್ಟೆಂಬರ್ 21 ರ ಬೆಳಿಗ್ಗೆ 06:00 ರವರೆಗೆ.

  • 9ನೇ ದಿನದ ವಿಸರ್ಜನೆ: ಸೆಪ್ಟೆಂಬರ್ 21 ರ ರಾತ್ರಿ 11:59 ರಿಂದ ಸೆಪ್ಟೆಂಬರ್ 23 ರ ಬೆಳಿಗ್ಗೆ 06:00 ರವರೆಗೆ.

  • 11ನೇ ದಿನದ ವಿಸರ್ಜನೆ: ಸೆಪ್ಟೆಂಬರ್ 23 ರ ರಾತ್ರಿ 11:59 ರಿಂದ ಸೆಪ್ಟೆಂಬರ್ 25 ರ ಬೆಳಿಗ್ಗೆ 06:00 ರವರೆಗೆ.

  • 13ನೇ ದಿನದ ವಿಸರ್ಜನೆ: ಸೆಪ್ಟೆಂಬರ್ 25 ರ ರಾತ್ರಿ 11:59 ರಿಂದ ಸೆಪ್ಟೆಂಬರ್ 27 ರ ಬೆಳಿಗ್ಗೆ 06:00 ರವರೆಗೆ.

ಉತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮತ್ತು ಗಲಭೆ ಮುಕ್ತ ವಾತಾವರಣ ನಿರ್ಮಿಸಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS: ಸೆ.21 ರಿಂದ ಕರ್ನಾಟಕ ವಿಧಾನಸಭೆ ವಿಶೇಷ ಅಧಿವೇಶನ ಆರಂಭ: ಕಸ್ತೂರಿರಂಗನ್ ವರದಿ, ರೈತರ ಸಮಸ್ಯೆಗಳ ಚರ್ಚೆಕ್ಲೈಮ್ಯಾಕ್ಸ್‌ ಘಟ್ಟ ತಲುಪಿದ ಬಿಜೆಪಿ ಪಾದಯಾತ್ರೆ: ಬಳ್ಳಾರಿ ಜಿಲ್ಲೆಗೆ ಎಂಟ್ರಿ ಕೊಟ್ಟ ಬಿಜೆಪಿ ನಾಯಕರುರಾಜ್ಯದಲ್ಲಿ ಶಾಲಾ-ಕಾಲೇಜುಗಳ ಮಾನ್ಯತೆ ನವೀಕರಣ ನಿಯಮ ಸರಳೀಕರಣ: ಮಧ್ಯಂತರ ವರದಿಯಲ್ಲಿ ಏನಿದೆ ಗೊತ್ತಾ? ಇಲ್ಲಿದೆ ಮಾಹಿತಿGOOD NEWS: 100 ದಿನದ ಸಂಭ್ರಮಕ್ಕೆ ಬಡವರಿಗೆ 'ಫ್ರೀ ಸೈಟ್' ಭಾಗ್ಯ: '15 ಲಕ್ಷ ಉಚಿತ ನಿವೇಶನ' ಹಂಚಿಕೆಗೆ ರಾಜ್ಯ ಸರ್ಕಾರ ಅಸ್ತು!ಆರೋಗ್ಯ ಇಲಾಖೆಯಲ್ಲಿ 51 ಜನರಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿ ಆದೇಶ ಪತ್ರ ವಿತರಿಸಿದ ಸಚಿವ ಯು.ಟಿ ಖಾದರ್ಶಾಲಾ-ಕಾಲೇಜುಗಳ ಮಾನ್ಯತೆ ನವೀಕರಣ ನಿಯಮ ಸರಳೀಕರಣ: ಮಧ್ಯಂತರ ವರದಿಯಲ್ಲಿ ಏನಿದೆ ಗೊತ್ತಾ? ಇಲ್ಲಿದೆ ಮಾಹಿತಿಫ್ರಾನ್ಸ್‌ನಲ್ಲಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ: ಲಿಸಿ ಏರೋಸ್ಪೇಸ್, ಆರ್ಕೆಮಾ ಕಂಪನಿಗಳ ಜತೆ ಮಹತ್ತ್ವದ ವಿಚಾರ ವಿನಿಮಯಬಿಜೆಪಿ ಪಾದಯಾತ್ರೆ ಕರ್ನಾಟಕದಲ್ಲಿ NDA ಸರ್ಕಾರ ತರುವ ನಿಟ್ಟಿನಲ್ಲಿ ಭದ್ರ ಬುನಾದಿ: ಬಿ.ವೈ.ವಿಜಯೇಂದ್ರಯುಜಿ ಸಿಇಟಿ ಸೀಟು ಹಂಚಿಕೆ ಮುಕ್ತಾಯ: ಎಂಜಿನಿಯರಿಂಗ್ 24,283 ಉಳಿಕೆ ಸೀಟು ಕಾಲೇಜುಗಳಿಗೆ ಹಸ್ತಾಂತರಗಣೇಶೋತ್ಸವ ಹಿನ್ನೆಲೆ: ಸೆ.13ರಿಂದ 27ರವರೆಗೆ ಈ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಡಿಸಿ ಆದೇಶ