LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೋರಿಂಗ್ ಬ್ರೇಕ್‌ಫಾಸ್ಟ್‌ಗೆ ಗುಡ್ ಬೈ ಹೇಳಿ: ಹಸಿರು ಚಟ್ನಿ ಬಳಸಿ ಅವಲಕ್ಕಿಯನ್ನು ಇನ್ನಷ್ಟು ಟೇಸ್ಟಿ ಮಾಡಿ

ಭಾರತೀಯ ಮನೆಗಳಲ್ಲಿ ಬೆಳಗಿನ ಉಪಹಾರ ಎಂದರೆ ಮೊದಲು ನೆನಪಾಗುವುದೇ ಅವಲಕ್ಕಿ ಅಥವಾ ಪೋಹಾ. ತಯಾರಿಸಲು ಸುಲಭ ಮತ್ತು ತಿನ್ನಲು ಹಗುರವಾಗಿರುವ ಕಾರಣ ಇದು ಎಲ್ಲರ ನೆಚ್ಚಿನ ಬ್ರೇಕ್‌ಫಾಸ್ಟ್. ಸಾಮಾನ್ಯವಾಗಿ ನಾವು ಈರುಳ್ಳಿ ಅವಲಕ್ಕಿ ಅಥವಾ ತರಕಾರಿ ಪೋಹಾವನ್ನು ಸವಿದಿರುತ್ತೇವೆ. ಆದರೆ ಈಗ ಅವಲಕ್ಕಿಗೆ ಹೊಸ ರುಚಿ ನೀಡುವ ‘ಗ್ರೀನ್ ಚಟ್ನಿ ಪೋಹಾ’ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇದರ ವಿಶೇಷತೆ ಮತ್ತು ತಯಾರಿಸುವ ವಿಧಾನ ಇಲ್ಲಿದೆ.

ಗ್ರೀನ್ ಚಟ್ನಿ ಪೋಹಾದ ವಿಶೇಷತೆ ಏನು? ಸಾಮಾನ್ಯ ಅವಲಕ್ಕಿಗೆ ಹೋಲಿಸಿದರೆ ಇದು ನೋಡಲು ಆಕರ್ಷಕ ಹಸಿರು ಬಣ್ಣದಲ್ಲಿರುತ್ತದೆ. ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿಯ ಮಿಶ್ರಣವು ಇದಕ್ಕೆ ವಿಭಿನ್ನ ಘಮ ಮತ್ತು ಖಾರವನ್ನು ನೀಡುತ್ತದೆ. ಇದು ಕೇವಲ ರುಚಿಯಲ್ಲಿ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿದೆ. ಕಡಿಮೆ ಎಣ್ಣೆ ಬಳಸಿ ತಯಾರಿಸುವುದರಿಂದ ತೂಕ ಇಳಿಸುವವರಿಗೂ ಇದು ಹೇಳಿ ಮಾಡಿಸಿದ ಉಪಹಾರವಾಗಿದೆ.

ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಗಟ್ಟಿ ಅವಲಕ್ಕಿ
  • ಕೊತ್ತಂಬರಿ ಸೊಪ್ಪು
  • ಹಸಿಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ
  • ಕರಿಬೇವು
  • ಸಾಸಿವೆ, ಉದ್ದಿನಬೇಳೆ ಮತ್ತು ಕಡಲೆಬೇಳೆ
  • ಶೇಂಗಾ ಬೀಜ
  • ಈರುಳ್ಳಿ
  • ರುಚಿಗೆ ತಕ್ಕಷ್ಟು ಉಪ್ಪು
  • ಲಿಂಬೆ ಹಣ್ಣಿನ ರಸ

ತಯಾರಿಸುವ ವಿಧಾನ ಮೊದಲು ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಸ್ವಲ್ಪ ಕರಿಬೇವನ್ನು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಸ್ವಲ್ಪ ನೀರು ಮತ್ತು ಐಸ್ ಕ್ಯೂಬ್ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಇದನ್ನು ಸೋಸಿಕೊಂಡು ಹಸಿರು ನೀರನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಿ. ಇತ್ತ ಅವಲಕ್ಕಿಯನ್ನು ಚೆನ್ನಾಗಿ ತೊಳೆದು ನೀರು ಬಸಿದು ಪಕ್ಕಕ್ಕೆ ಇರಿಸಿ.

ಒಂದು ಪಾತ್ರೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಶೇಂಗಾ ಮತ್ತು ಕರಿಬೇವು ಹಾಕಿ ಒಗ್ಗರಣೆ ಕೊಡಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಬಾಡಿಸಿ. ಈಗ ಮೊದಲೇ ಸಿದ್ಧಪಡಿಸಿದ ಹಸಿರು ಚಟ್ನಿ ನೀರನ್ನು ಇದಕ್ಕೆ ಸೇರಿಸಿ ಸ್ವಲ್ಪ ಕುದಿಯಲು ಬಿಡಿ. ಕೊನೆಯದಾಗಿ ತೊಳೆದಿಟ್ಟ ಅವಲಕ್ಕಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಡಿಸುವ ಮುನ್ನ ಮೇಲೆ ಸ್ವಲ್ಪ ನಿಂಬೆ ರಸ ಮತ್ತು ಸೇವ್ ಅಥವಾ ಮಿಕ್ಸ್ಚರ್ ಉದುರಿಸಿದರೆ ರುಚಿಕರವಾದ ಗ್ರೀನ್ ಚಟ್ನಿ ಪೋಹಾ ಸಿದ್ಧ.

ಇದನ್ನು ಬಿಸಿಬಿಸಿಯಾದ ಟೀ ಅಥವಾ ಫಿಲ್ಟರ್ ಕಾಫಿಯೊಂದಿಗೆ ಸವಿಯಬಹುದು. ಸ್ವಲ್ಪ ಮೊಸರು ಅಥವಾ ಕಾಯಿ ಚಟ್ನಿ ಜೊತೆಗೂ ಇದು ಅದ್ಭುತ ಕಾಂಬಿನೇಷನ್ ಎನಿಸಿಕೊಳ್ಳುತ್ತದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ