LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೋಟೆಲ್ ಶೈಲಿಯ ಖಾರ ಹಾಗೂ ಮಸಾಲೆಯುಕ್ತ ಸಿಂಗಾಪುರ್ ಫ್ರೈಡ್ ರೈಸ್: ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ

ಮನೆಯಲ್ಲಿ ಪ್ರತಿದಿನ ಒಂದೇ ರೀತಿಯ ಊಟ ಸವಿದು ಬೇಸರವಾಗಿದ್ದರೆ, ಹೋಟೆಲ್ ಶೈಲಿಯ ಖಾರ ಹಾಗೂ ಮಸಾಲೆಯುಕ್ತ ಸಿಂಗಾಪುರ್ ಫ್ರೈಡ್ ರೈಸ್ ರೆಸಿಪಿಯನ್ನು ಒಮ್ಮೆ ಪ್ರಯತ್ನಿಸಬಹುದು. ವಿವಿಧ ಸಾಸ್‌ಗಳ ಮಸಾಲೆಯುಕ್ತ ಸುವಾಸನೆ ಮತ್ತು ತರಕಾರಿಗಳ ಕ್ರಂಚಿ ರುಚಿ ಈ ಖಾದ್ಯದ ವೈಶಿಷ್ಟ್ಯ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಈ ಚೈನೀಸ್ ಶೈಲಿಯ ರೈಸ್ ರೆಸಿಪಿಯನ್ನು ಕೇವಲ ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಬಹುದು.

ಬೇಕಾಗುವ ಸಾಮಗ್ರಿಗಳು

  • ಅನ್ನ – ಒಂದು ಕಪ್
  • ಕತ್ತರಿಸಿದ ಬೆಳ್ಳುಳ್ಳಿ – ಒಂದು ಚಮಚ
  • ಆಲಿವ್ ಆಯಿಲ್ ಅಥವಾ ಅಡುಗೆ ಎಣ್ಣೆ – ಎರಡು ಚಮಚ
  • ಕಾಳುಮೆಣಸಿನ ಪುಡಿ (ಪೆಪ್ಪರ್) – ಕಾಲು ಚಮಚ
  • ಸಣ್ಣಗೆ ಹೆಚ್ಚಿದ ಉಳ್ಳಿ ಗಿಡ (ಸ್ಪ್ರಿಂಗ್ ಆನಿಯನ್) – ಅರ್ಧ ಕಪ್
  • ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಂ) – ಅರ್ಧ ಕಪ್
  • ತುರಿದ ಕ್ಯಾರೆಟ್ – ಕಾಲು ಕಪ್
  • ಹಸಿಮೆಣಸಿನಕಾಯಿ – ಒಂದು
  • ವಿನೆಗರ್ – ಅರ್ಧ ಚಮಚ
  • ರೆಡ್ ಚಿಲ್ಲಿ ಸಾಸ್ ಅಥವಾ ಪೆರಿ ಪೆರಿ ಸಾಸ್ – ಎರಡು ಚಮಚ
  • ಲೈಟ್ ಸೋಯಾ ಸಾಸ್ – ಒಂದು ಚಮಚ
  • ಚಿಲ್ಲಿ ಗಾರ್ಲಿಕ್ ಸಾಸ್ – ಒಂದು ಚಮಚ
  • ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ಸರಳ ವಿಧಾನ

ಮೊದಲಿಗೆ ಅನ್ನವನ್ನು ಉದುರು ಉದುರಾಗಿ ಬೇಯಿಸಿಕೊಂಡು ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು. ನಂತರ ಒಂದು ಅಗಲವಾದ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ಬಳಿಕ ಅದಕ್ಕೆ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಇದಕ್ಕೆ ಹಸಿಮೆಣಸಿನಕಾಯಿ, ಉಳ್ಳಿ ಗಿಡ ಮತ್ತು ಕ್ಯಾರೆಟ್ ತುರಿ ಸೇರಿಸಿ ಕೆಲವು ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಚೆನ್ನಾಗಿ ಬಾಡಿಸಿಕೊಳ್ಳಿ.

ನಂತರ ಕತ್ತರಿಸಿದ ಕ್ಯಾಪ್ಸಿಕಂ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ತರಕಾರಿಗಳು ಸ್ವಲ್ಪ ಮೆತ್ತಗಾಗುವವರೆಗೆ ಕೈಯಾಡಿಸಿ. ತರಕಾರಿಗಳು ಅತಿ ಹೆಚ್ಚು ಬೇಯಬಾರದು, ತಿನ್ನುವಾಗ ಕ್ರಂಚಿ ಎನಿಸಬೇಕು.

ಈಗ ಬಾಣಲೆಗೆ ಮೊದಲೇ ಬೇಯಿಸಿಟ್ಟ ಅನ್ನವನ್ನು ಹಾಕಿ, ಅದರ ಜೊತೆಗೆ ರೆಡ್ ಚಿಲ್ಲಿ ಸಾಸ್, ಸೋಯಾ ಸಾಸ್, ಚಿಲ್ಲಿ ಗಾರ್ಲಿಕ್ ಸಾಸ್ ಹಾಗೂ ವಿನೆಗರ್ ಸೇರಿಸಿ. ಕೊನೆಯದಾಗಿ ಕಾಳುಮೆಣಸಿನ ಪುಡಿಯನ್ನು ಉದುರಿಸಿ, ಎಲ್ಲ ಸಾಮಗ್ರಿಗಳು ಅನ್ನದೊಂದಿಗೆ ಚೆನ್ನಾಗಿ ಬೆರೆಯುವಂತೆ ಹೆಚ್ಚಿನ ಉರಿಯಲ್ಲಿ ಚೆನ್ನಾಗಿ ಟಾಸ್ ಮಾಡಿ.

ಈಗ ಬಿಸಿಬಿಸಿಯಾದ ಮತ್ತು ಮಸಾಲೆಯುಕ್ತ ಸಿಂಗಾಪುರ್ ಫ್ರೈಡ್ ರೈಸ್ ಸವಿಯಲು ಸಿದ್ಧ. ಇದನ್ನು ಮಂಚೂರಿಯನ್ ಅಥವಾ ರಾಯ್ತ ಜೊತೆ ಸವಿಯಲು ತುಂಬಾ ರುಚಿಯಾಗಿರುತ್ತದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ