ಕನ್ವರ್ ಯಾತ್ರೆ ಉತ್ತರ ಭಾರತದ ಹಿಂದೂಗಳ ಪಾಲಿಗೆ ಪವಿತ್ರ ಯಾತ್ರೆಗಳಲ್ಲಿ ಒಂದು. ಹಲವು ಶತಮಾನದ ಇತಿಹಾಸವಿರುವ ಈ ಯಾತ್ರೆಯಲ್ಲಿ ಶಿವನ ಭಕ್ತರು ಗಂಗಾ ನದಿಯಿಂದ ಪವಿತ್ರ ಜಲವನ್ನು ಸಂಗ್ರಹಿಸಿ, ಕಾಲ್ನಡಿಗೆಯಲ್ಲಿ ತಮ್ಮ ಊರುಗಳಿಗೆ ತೆರಳಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ನಡೆಯುವ ಈ ಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಕೇಸರಿ ವಸ್ತ್ರ ಧರಿಸುವ ಭಕ್ತರನ್ನು ‘ಕನ್ವರಿಯರು’ ಎಂದು ಕರೆಯಲಾಗುತ್ತದೆ.
ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಕನ್ವರ್ ಯಾತ್ರೆ ಆರಂಭಗೊಂಡಿದ್ದು, ಉತ್ತರ ಭಾರತದ ಹಿಂದೂಗಳು ಎಂದಿನಂತೆ ಈ ಬಾರಿಯೂ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ಯಾತ್ರೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇನ್ನು ಹಲವೆಡೆ ಸಾಂಪ್ರದಾಯಿಕವಾಗಿ ಯಾತ್ರೆಯನ್ನು ಕೈಗೊಂಡರೆ ಕೆಲ ಪ್ರದೇಶಗಳಲ್ಲಿ ಯಾತ್ರೆಗೆ ಹಾಗೂ ಹಿಂದೂ ಸಂಪ್ರದಾಯಕ್ಕೆ ಧಕ್ಕೆ ಬರುವ ಹಾಗೆ ನಡೆದುಕೊಳ್ಳುವ ಮೂಲಕ ಕಪ್ಪುಚುಕ್ಕೆಯಾಗಿದ್ದಾರೆ.
ಹೌದು, ಯುವತಿಯರು ಅರೆನಗ್ನವಾಸ್ಥೆಯಲ್ಲಿ ನಡು ರಸ್ತೆಯಲ್ಲಿ ಹೆಜ್ಜೆ ಹಾಕಿದ್ದು, ಇವರ ಜತೆಗೆ ಹಿಂದೂಗಳ ಪಾಲಿನ ಪವಿತ್ರ ಕೇಸರಿ ಬಣ್ಣದ ಧ್ವಜ ಹಿಡಿದ ಅನೇಕ ಯುವಕರು ಅಶ್ಲೀಲವಾಗಿ ಕುಣಿದು ಕುಪ್ಪಳಿಸಿದ್ದಾರೆ. ದೇಹ ಪ್ರದರ್ಶಿಸುವ ಸೀರೆ, ಬಟ್ಟೆ ಧರಿಸಿ ಹೆಜ್ಜೆ ಹಾಕಿದ್ದು, ಆ ಯುವತಿಯರ ಮೇಲೆ ನೀರು ಸುರಿದು ಅಸಭ್ಯವಾಗಿ ನಡೆದುಕೊಂಡಿದ್ದಾರೆ.
ಸದ್ಯ ಈ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ಸಂಪ್ರದಾಯಬದ್ಧವಾಗಿ ಪಾಲಿಸಿಕೊಂಡು ಬಂದಿರುವ ಆಚರಣೆಗೆ ಇಂತಹ ನಡೆಯ ಮೂಲಕ ಧಕ್ಕೆ ತರುತ್ತಿದ್ದಾರೆ ಎಂದು ಪಕ್ಕಾ ಹಿಂದೂಗಳು ಕಿಡಿಕಾರಿದ್ದಾರೆ.