ಜಾಗತಿಕ ಮಾರುಕಟ್ಟೆಯ ಚೇತರಿಕೆ ಮತ್ತು ಆರ್ಥಿಕ ಬದಲಾವಣೆಗಳ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಗುರುವಾರ ಭಾರಿ ಪ್ರಮಾಣದಲ್ಲಿ ಜಿಗಿತ ಕಂಡಿವೆ. ನಿನ್ನೆ ಬುಧವಾರ ಇಳಿಕೆಯಾಗಿದ್ದ ಬಂಗಾರದ ಬೆಲೆ, ಇಂದು ಒಂದೇ ದಿನದಲ್ಲಿ ಪ್ರತಿ 10 ಗ್ರಾಂ ಅಪರಂಜಿ ಚಿನ್ನಕ್ಕೆ ₹4,300 ರಷ್ಟು ಏರಿಕೆಯಾಗಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ ಬರೋಬ್ಬರಿ ₹10,000 ದುಬಾರಿಯಾಗಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ ಇಂದಿನ ದರ ವಿವರ ಹೀಗಿದೆ:
ಚಿನ್ನ-ಬೆಳ್ಳಿ ದರಪಟ್ಟಿ (ಬೆಂಗಳೂರು ಮಾರುಕಟ್ಟೆ):
22 ಕ್ಯಾರೆಟ್ (ಆಭರಣ ಚಿನ್ನ)
1 ಗ್ರಾಂ ದರ: ₹14,600
ಇಂದಿನ ಏರಿಕೆ (ಗ್ರಾಂಗೆ): +₹395
10 ಗ್ರಾಂ ದರ: ₹1,46,000 (₹3,950 ಏರಿಕೆ)
24 ಕ್ಯಾರೆಟ್ (ಅಪರಂಜಿ ಚಿನ್ನ)
1 ಗ್ರಾಂ ದರ: ₹15,927
ಇಂದಿನ ಏರಿಕೆ (ಗ್ರಾಂಗೆ): +₹430
10 ಗ್ರಾಂ ದರ: ₹1,59,270 (₹4,300 ಏರಿಕೆ)
18 ಕ್ಯಾರೆಟ್ (ಆಭರಣ ಚಿನ್ನ)
1 ಗ್ರಾಂ ದರ: ₹11,946
ಇಂದಿನ ಏರಿಕೆ (ಗ್ರಾಂಗೆ): +₹323
10 ಗ್ರಾಂ ದರ: ₹1,19,460
ಬೆಳ್ಳಿ ದರ
1 ಗ್ರಾಂ ದರ: ₹255
1 ಕೆಜಿ ಬೆಳ್ಳಿ ದರ: ₹2,55,000 (ಒಂದೇ ದಿನದಲ್ಲಿ ₹10,000 ಏರಿಕೆ)
ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಲೋಹಗಳ ಬೆಲೆ, ಗುರುವಾರದಂದು ಈ ಮಟ್ಟದಲ್ಲಿ ಜಿಗಿರುವುದು ಆಭರಣ ಪ್ರಿಯರಿಗೆ ಮತ್ತು ಖರೀದಿದಾರರಿಗೆ ಭಾರಿ ಆಘಾತ ನೀಡಿದೆ.