LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆರು ವರ್ಷಗಳ ಪ್ರೀತಿ: ಮದುವೆಯಾದ ಒಂದೇ ತಿಂಗಳಲ್ಲಿ ಹೋಟೆಲ್ ನಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಿರ್ದೇಶಕ ಬೆಲ್‌ರಾಜ್ ಕಳರಿಕಲ್

ತಿರುವನಂತಪುರಂ: ಮಲಯಾಳಂನ ಉದಯೋನ್ಮುಖ ನಿರ್ದೇಶಕ 28 ವರ್ಷದ ಬೆಲ್‌ರಾಜ್ ಕಳರಿಕಲ್ ಅವರು ಕೊಚ್ಚಿಯ ಹೋಟೆಲ್ ವೊಂದರ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿಯಾಗಿರುವ ಘಟನೆ ನಡೆದಿದೆ.

ಬೆಲ್‌ರಾಜ್ ಕಳರಿಕಲ್ ಅವರಿಗೆ ಕೇವಲ 28 ವರ್ಷ ವಯಸ್ಸಾಗಿತ್ತು. ಅವರ ನಿಧನದ ಸುದ್ದಿ ಇಡೀ ಮಲಯಾಳಂ ಚಿತ್ರರಂಗಕ್ಕೆ ಆಘಾತವನ್ನುಂಟುಮಾಡಿದೆ. ಅವರ ಸ್ವತಂತ್ರ ನಿರ್ದೇಶನದ ಮೊದಲ ವೆಬ್ ಸಿರೀಸ್ ‘ಕಾಪಿ ಸ್ಕ್ವಾಡ್’ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಆರಂಭಿಸಿದ ಕೆಲವೇ ದಿನಗಳಲ್ಲಿ ಈ ದುರಂತ ಸಂಭವಿಸಿದೆ.

ಬೆಲ್‌ರಾಜ್ ಕಳರಿಕಲ್ ಅವರ ಸಾವಿಗೆ ನಿಖರವಾದ ಕಾರಣ ಏನು ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೂ ಪ್ರಾಥಮಿಕ ತನಿಖೆ ಹಾಗೂ ವರದಿಗಳ ಪ್ರಕಾರ ಅವರು ಹೃದಯಾಘಾತದಿಂದ ನಿಧನರಾಗಿರಬಹುದು ಎಂದು ಶಂಕಿಸಲಾಗಿದೆ. ಅವರ ಮೃತದೇಹವನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಮರಣೋತ್ತರ ವರದಿಗಾಗಿ ಕಾಯುತ್ತಿದ್ದಾರೆ.

ಬೆಲ್‌ರಾಜ್ ಕಳರಿಕಲ್ ಅವರು ‘ಒಟ್ಟಮುರಿ ವೆಲಿಚಂ’, ‘ಕೇರಳ ಕ್ರೈಮ್ ಫೈಲ್ಸ್’ ಮುಂತಾದ ಪ್ರಾಜೆಕ್ಟ್​ಗಳಿಂದ ಹೆಸರುವಾಸಿಯಾದ ‘ಫಸ್ಟ್ ಪ್ರಿಂಟ್ ಸ್ಟುಡಿಯೋಸ್’ ನಿರ್ಮಾಣ ಸಂಸ್ಥೆಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಸ್ವತಂತ್ರ ನಿರ್ದೇಶಕರಾಗುವ ಮೊದಲು ಅವರು ‘ನಿಳಲ್’, ‘ಮಧುರಂ’, ‘ಡಾಕಿನಿ’ ಮುಂತಾದ ಜನಪ್ರಿಯ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ಇತ್ತೀಚೆಗಷ್ಟೇ ಬಿಡುಗಡೆಯಾದ ‘ಕಾಪಿ ಸ್ಕ್ವಾಡ್’ ವೆಬ್ ಸೀರೀಸ್ ಬೆಲ್‌ರಾಜ್ ಕಳರಿಕಲ್ ಅವರ ವೃತ್ತಿಜೀವನದಲ್ಲಿ ಪ್ರಮುಖ ಮೈಲಿಗಲ್ಲಾಗಿತ್ತು. ಯುವ ನಿರ್ದೇಶಕನ ಅಕಾಲಿಕ ಮರಣಕ್ಕೆ ಮಲಯಾಳಂ ಚಿತ್ರರಂಗದ ಗಣ್ಯರು, ತಾಮ್ತ್ರಿಕ ವರ್ಗದವರು ಹಾಗೂ ಜಿಯೋ ಹಾಟ್‌ಸ್ಟಾರ್ ಸಂಸ್ಥೆಯು ಕಂಬನಿ ಮಿಡಿದಿದೆ.

ಬೆಲ್‌ರಾಜ್ ಕಳರಿಕಲ್ ಅವರು ಸುದೀರ್ಘ 6 ವರ್ಷಗಳ ಪ್ರೀತಿಯ ನಂತರ ಸೆಪ್ಟೆಂಬರ್ 11ರಂದು ಆಥಿರಾ ಬಿಂದು ಸಾಬು ಎಂಬುವವರನ್ನು ವಿವಾಹವಾಗಿದ್ದರು. ಮದುವೆಯಾಗಿ ಕೇವಲ ಒಂದೂವರೆ ತಿಂಗಳು ಕಳೆಯುವಷ್ಟರಲ್ಲೇ ಅವರು ಶವವಾಗಿ ಪತ್ತೆಯಾಗಿದ್ದಾರೆ. ಅವರ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.

ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಭೀಕರ ಕಾಲ್ತುಳಿತಕ್ಕೆ 19 ಜನರು ಬಲಿ ಪ್ರಕರಣ: ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ: ಒಬ್ಬರಿಗೆ ‘ಗ್ರೂಪ್ ಡಿ’ ಹುದ್ದೆ ನೌಕರಿ ಘೋಷಣೆ

ಕೋಲ್ಕತ್ತಾ: ಚೋರ್ಬಗಾನ್ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, 19 ಜನರು ಮೃತಪಟ್ಟಿದ್ದಾರೆ., 25 ಜನರು ಗಾಯಗೊಂಡಿರುವ ಘಟನೆ ನಡೆದಿದೆ.

ಉತ್ತರ ಕೋಲ್ಕತ್ತಾದ ಚೋರ್ಬಗಾನ್ ದುರ್ಗಾ ಪೂಜೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಏಕಾಏಕಿ ಮಳೆ ಬಂದ ಕಾರಣ ಪೂಜಾ ಪೆಂಡಾಲ್‌ನ ಹೊರಗೆ ಕಾಯುತ್ತಿದ್ದ ಜನಸಮೂಹವು ಒಮ್ಮೆಲೇ ಒಳಗೆ ನುಗ್ಗಿದೆ. ಈ ವೇಳೆ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರ ಕೋಲ್ಕತ್ತಾದ ಚೋರ್ಬಗಾನ್‌ನಲ್ಲಿ ದುರ್ಗಾ ಪೂಜೆ ನಡೆಯುತ್ತಿದ್ದಾಗ ಆಯೋಜಕರು ಮಾಡಿದ ಘೋಷಣೆಯೊಂದರಿಂದಾಗಿ ನೂಕು ನುಗ್ಗಲು ಉಂಟಾಗಿ, ಈ ದುರಂತ ಸಂಭವಿಸಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ತಿಳಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ, 19 ಮಂದಿ ಮೃತಪಟ್ಟಿದ್ದಾರೆ ಮತ್ತು 25 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ. ಸಂತ್ರಸ್ತರನ್ನು ದಾಖಲಿಸಿದ್ದ ಕೋಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಿಎಂ ಸುವೆಂಧು ಅಧಿಕಾರಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಇದೇ ವೇಳೆ ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರ ಹಾಗೂ ಒಬ್ಬರಿಗೆ ‘ಗ್ರೂಪ್ ಡಿ’ ಶ್ರೇಣಿಯ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಘೋಷಿಸಿದ್ದಾರೆ.

ಚೋರ್ಬಗಾನ್ ದುರ್ಗಾ ಪೂಜಾ ಆಯೋಜಕರು, ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರ ಕುಟುಂಬ ಸದಸ್ಯರ ಪ್ರಕಾರ, ಪೆಂಡಾಲ್ ಪ್ರದೇಶದಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ಊದಿದ ಸೀಟಿಯಿಂದಾಗಿ, ಪೆಂಡಾಲ್‌ಗೆ ಭೇಟಿ ನೀಡಲು ಕಾಯುತ್ತಿದ್ದ ಜನರಲ್ಲಿ ನೂಕುನುಗ್ಗಲು ಉಂಟಾಯಿತು ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ಇದು ಅತ್ಯಂತ ದುಃಖಕರ ಘಟನೆ. ನಾವು ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಆದ್ಯತೆ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಸೈಬರ್ ಕೃತ್ಯ: ಬಾಯ್‌ಫ್ರೆಂಡ್‌ಗೆ ಕಳುಹಿಸಿದ್ದ ಖಾಸಗಿ ಫೋಟೋ, ವಿಡಿಯೋ ಪೋರ್ನ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ಇಂಡಿಗೋ ವಿಮಾನದಲ್ಲಿ ಅಭಿಮಾನಿಗೆ ಆಟೋಗ್ರಾಫ್ ನೀಡಿದ ರಾಹುಲ್ ದ್ರಾವಿಡ್; 24 ಲಕ್ಷ ವೀಕ್ಷಣೆ ಕಂಡ ವಿಡಿಯೋ ವೈರಲ್ಕಾಂಗ್ರೆಸ್ ಸರ್ಕಾರ ಅಂತ್ಯದ ಹತ್ತಿರದಲ್ಲಿದೆ: ಕೇಂದ್ರ ಸಚಿವ ಹೆಚ್‍.ಡಿ.ಕುಮಾರಸ್ವಾಮಿಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಬರಗಾಲದ ಚರ್ಚೆಗೆ ಪ್ರಧಾನಿ ಭೇಟಿ: ಸಿಎಂ ಡಿ ಕೆ ಶಿವಕುಮಾರ್ಸಾಗರಕ್ಕೆ ಬಂತು 'AI ದಂತ ಚಿಕಿತ್ಸೆ': ನಾಳೆ ವಿದುಷಿ ವಸುಧಾ ಶರ್ಮ ಉದ್ಘಾಟನೆ, ಪುಟಾಣಿ ಗಾಯಕಿ ದಿಯಾ ಹೆಗಡೆ ಉಪಸ್ಥಿತಿ!ಸಾಗರಕ್ಕೆ ಬಂತು 'AI ದಂತ ಚಿಕಿತ್ಸೆ': ನಾಳೆ ಜೀ ಕನ್ನಡ ಸರಿಗಮಪ ಖ್ಯಾತಿಯ ದಿಯಾ ಹೆಗಡೆ ಗ್ರ್ಯಾಂಡ್ ಓಪನ್!ಸಾಗರದ ಶೃಂಗೇರಿ ಶಂಕರಮಠದಲ್ಲಿ ನವರಾತ್ರಿ ವೈಭವ: ಸಾಧಕರಿಗೆ 'ಶಾರದಾ ಪ್ರಸಾದಮ್' ಪುರಸ್ಕಾರ ಪ್ರದಾನಬರ ನೀಗಿಸಲು ಸಾಗರದ ಮಾರಿಕಾಂಬೆಯಲ್ಲಿ ಪ್ರಾರ್ಥನೆ: ಶಾಸಕ ಗೋಪಾಲಕೃಷ್ಣ ಬೇಳೂರುಸಿಗಂದೂರು ಚೌಡೇಶ್ವರಿ ಕ್ಷೇತ್ರಕ್ಕೆ 'ಸದ್ಗುರು ಶ್ರೀ ಮಧುಸೂದನ ಸಾಯಿ' ಎಲೆಕ್ಟ್ರಿಕ್ ಬಸ್ ಕೊಡುಗೆGOOD NEWS: ರಾಜ್ಯದ 'ಸರ್ಕಾರಿ ನೌಕರ'ರಿಗೆ ಗುಡ್ ನ್ಯೂಸ್: 'ಸಕಾಲ'ದಡಿ ಸಂಬಳ, GPF, ರಜೆ ಮಂಜೂರಾತಿಗೆ ಡೆಡ್‌ಲೈನ್ ಫಿಕ್ಸ್