LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೆನ್ಸಾರ್ ನಿಯಮದ ಬಿಸಿ: ರಶ್ಮಿಕಾ ಮಂದಣ್ಣ ‘ಮೈಸಾ’ ರಿಲೀಸ್ ಡೇಟ್ ಬದಲಾವಣೆ?

ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಮೈಸಾ ಬಿಡುಗಡೆಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ನವೆಂಬರ್ 27ರಂದು ತೆರೆಗೆ ಬರಬೇಕಿದ್ದ ಈ ಚಿತ್ರದ ಬಿಡುಗಡೆಯನ್ನು ಡಿಸೆಂಬರ್‌ಗೆ ಮುಂದೂಡುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ.

ಚೊಚ್ಚಲ ನಿರ್ದೇಶಕ ರವೀಂದ್ರ ಪುಲ್ಲೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಅನ್‌ಫಾರ್ಮುಲಾ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಇತ್ತೀಚೆಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಥವಾ ಸೆನ್ಸಾರ್ ಮಂಡಳಿಯು ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಕೊನೆಯ ಕ್ಷಣದ ವಿಳಂಬ ತಪ್ಪಿಸುವ ಸಲುವಾಗಿ ಸಿನಿಮಾ ಬಿಡುಗಡೆಗೆ ಕನಿಷ್ಠ ಎರಡು ವಾರಗಳ ಮುಂಚಿತವಾಗಿಯೇ ಚಿತ್ರದ ಅಂತಿಮ ಪ್ರತಿಯನ್ನು ಪರಿಶೀಲನೆಗಾಗಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ. ಅಲ್ಲದೆ, ಮೊದಲೇ ಘೋಷಿಸಲಾದ ಬಿಡುಗಡೆಯ ದಿನಾಂಕದ ಆಧಾರದ ಮೇಲೆ ಪ್ರಮಾಣೀಕರಣ ಪ್ರಕ್ರಿಯೆಯನ್ನು ವೇಗವಾಗಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದೆ.

ಮೈಸಾ ಚಿತ್ರತಂಡವು ಪರಿಷ್ಕೃತ ಸೆನ್ಸಾರ್ ಮಾರ್ಗಸೂಚಿಗಳನ್ನು ಪಾಲಿಸಲು ಸಾಧ್ಯವಾಗದ ಕಾರಣ, ನಿಗದಿತ ಸಮಯಕ್ಕೆ ಅಂತಿಮ ಪ್ರತಿಯನ್ನು ಸಲ್ಲಿಸಲು ವಿಫಲವಾಗಿದೆ ಎನ್ನಲಾಗಿದೆ. ಇದೇ ಕಾರಣದಿಂದ ಸಿನಿಮಾ ರಿಲೀಸ್ ದಿನಾಂಕ ಮುಂದೂಡಿಕೆಯಾಗುವ ಲಕ್ಷಣಗಳು ಕಾಣಿಸಿಕೊಂಡಿವೆ. ಆದರೆ, ಈ ಕುರಿತು ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದ ಪ್ರಮುಖ ನೀರಿನ ಬ್ರ್ಯಾಂಡ್ ಬಿಸ್ಲೇರಿ ಕಂಪನಿಗೆ FSSAI ಬಿಗ್ ಶಾಕ್: ಅಸುರಕ್ಷಿತ ನೀರು ಮಾರಾಟ ಆರೋಪದಡಿ ಕಾನೂನು ಕ್ರಮಕ್ಕೆ ಅನುಮತಿ‘ಕೌನ್ ಬನೇಗಾ ಕರೋಡ್ ಪತಿ -18’ರಲ್ಲಿ ಪಂಜಾಬ್ ಬಗ್ಗೆ ಪ್ರಶ್ನೆ ವಿವಾದ: ಅಮಿತಾಭ್ ಬಚ್ಚನ್, ಸೋನಿ ಟಿವಿಗೆ ಸಂಕಷ್ಟ…?‘ಜಾತಿವಾದಿ, ಪುರುಷ ಪ್ರಧಾನ ಮನಸ್ಥಿತಿಯವರು’: ಬಿಜೆಪಿ, RSS ವಿರುದ್ಧ ರಾಹುಲ್ ಗಾಂಧಿ ಮತ್ತೆ ತೀವ್ರ ವಾಗ್ದಾಳಿ: ಅರ್ಧನಾರೀಶ್ವರ ಚಿತ್ರ ಪೋಸ್ಟ್ತಮ್ಮ ಮೊದಲ ದ್ವಿಪಕ್ಷೀಯ ವಿದೇಶಿ ಭೇಟಿಗಾಗಿ ದೆಹಲಿಗೆ ಆಗಮಿಸಿದ ನೇಪಾಳ ಪ್ರಧಾನಿ ಬಲೇಂದ್ರ ಶಾ: ನಾಳೆ ಪ್ರಧಾನಿ ಮೋದಿ ಜತೆ ಮಾತುಕತೆಬಾಕ್ಸ್ ಆಫೀಸ್ ನಲ್ಲಿ ‘ರಾಮಾಯಣ’ ನಾಗಾಲೋಟ: 17 ದಿನಗಳಲ್ಲಿ ಜಾಗತಿಕ ಗಳಿಕೆ ₹1,616 ಕೋಟಿ; ₹1,700 ಕೋಟಿ ಕ್ಲಬ್ ನತ್ತ ಯಶ್ ಸಿನಿಮಾGold Price Crash: 14 ತಿಂಗಳ ಕನಿಷ್ಠ ಮಟ್ಟಕ್ಕೆ ಚಿನ್ನದ ಬೆಲೆ, ಗರಿಷ್ಠ ದರದಿಂದ ಬರೋಬ್ಬರಿ ₹59,000 ಇಳಿಕೆಎನ್ವಿಡಿಯಾ ಎಐ ಚಿಪ್ ಗಳ ಕಳ್ಳಸಾಗಣೆ ಜಾಲ ಬಯಲು: ಸಿಂಗಾಪುರದ ಉದ್ಯಮಿ ಆಲಿಸ್ ಹುವಾಂಗ್ ವಿರುದ್ಧ ಗಂಭೀರ ಆರೋಪಡೆಟಾಲ್ ಸೋಪ್ ನಲ್ಲಿದ್ದ ಬ್ಲೇಡ್: ಸ್ನಾನ ಮಾಡುವಾಗ ಮಗುವಿನ ಕೆನ್ನೆಗೆ ಗಾಯ: ರೆಕಿಟ್ ಇಂಡಿಯಾ ಕಂಪನಿಗೆ ದಂಡ ವಿಧಿಸಿದ ಕೋರ್ಟ್ಪಿಯುಸಿ ವಿದ್ಯಾರ್ಥಿನಿಯನ್ನು ಇರಿದು ಕೊಂದ ಪ್ರಿಯಕರಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ: ಉತ್ಪಾದನಾ ವೆಚ್ಚ, ಕಚ್ಚಾ ವಸ್ತುಗಳ ದರ ಹೆಚ್ಚಳ ಹಿನ್ನೆಲೆ ಕಂಪನಿ ನಿರ್ಧಾರ